Monday, 13 February 2017

ಏಕಲವ್ಯ 

ಏಕಲವ್ಯ ಒಬ್ಬ ಮಹಾನ್ ವ್ಯಕ್ತಿ. ಗುರುವಿನ ಮೂರ್ತಿಯನ್ನು ಮಾಡಿ ಅದರ ಮುಂದೆ ವಿದ್ಯೆ ಕಲಿತ ಮಹಾನ್ ವಿದ್ಯಾರ್ಥಿ.
ಗುರುಗಳೇ ಮೆಚ್ಚುವ ರೀತಿಯಲ್ಲಿ ವಿದ್ಯೆಕಲಿತಾ ಮಹಾನ್ ಜ್ಞಾನಿ. ಗುರುಗಳೀಗಗಿ ತನ್ನ ಹೆಬ್ಬೆರಳನ್ನೇ ಕತ್ತರಿಸಿಕೊಟ್ಟ ವೀರ.
ಇಂಥಹ ವ್ಯಕ್ತಿಯ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.



Tuesday, 17 January 2017

ಕರ್ನಾಟಕ ಯೋಜನೆಗೆ ಸಂಬಂಧಿಸಿದ ಪ್ರಶ್ನೋತ್ತರಗಳು

1. ಹಸಿವು ಮುಕ್ತ ಕರ್ನಾಟಕ ಎಂಬ ಉದ್ದೇಶದಿಂದ ಜಾರಿಗೆ ಬಂದ ನೂತನ ಯೋಜನೆ ಯಾವುದು?

  • ಅನ್ನಭಾಗ್ಯ
  • ಹಸಿವು ವಿನಾಶ
  • ಅನ್ನದಾನ
  • ಕ್ಷೀರಧಾರೆ


ಉ: ಅನ್ನಭಾಗ್ಯ
ಕರ್ನಾಟಕ ಸರ್ಕಾರದ ಆಹಾರ ಇಲಾಖೆ ವತಿಯಿಂದ ಕಡು ಬಡವರಿಗೆ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಜೊತೆಗೆ ರಾಗಿ, ಜೋಳ, ಗೋಧಿಯನ್ನು ಮತ್ತು ರಾಜ್ಯದ ಬಡವರಿಗೂ ಸಹಿತ ಆಹಾರ ಭದ್ರತೆ ನೀಡಿ ಹಸಿವು ಮುಕ್ತ ರಾಜ್ಯ ನಿರ್ಮಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ 2013ರ ಜುಲೈ ತಿಂಗಳಿನಿಂದ ರಾಜ್ಯದಾದ್ಯಂತ ಜಾರಿಯಾಗಿದೆ.

2. ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರವು ಯಾವ ಯೋಜನೆಯನ್ನು ಜಾರಿಗೆತಂದಿದೆ?

  • ಪಡಿತರ ಖಾತ್ರಿ
  • ಅನ್ನ ರಕ್ಷಕ
  • ಭಕ್ಷಕಬಲಿ
  • ಪಡಿತರ ಭಾಗ್ಯ


ಉ: ಪಡಿತರ ಖಾತ್ರಿ
ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರವು ಪಡಿತರ ಖಾತ್ರಿ ಯೋಜನೆಯನ್ನು ಜಾರಿಗೆತಂದಿದೆ. ಇದರಿಂದಾಗಿ ಭಾನುವಾರವೂ ಸೇರಿದಂತೆ ಪ್ರತಿ ತಿಂಗಳು 1 ರಿಂದ 10ನೇ ತಾರೀಖಿನವರೆಗೆ ಬೆಳಿಗ್ಗೆ 8ರಿಂದ 12ರ ವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ನ್ಯಾಯ ಬೆಲೆ ಅಂಗಡಿಯನ್ನು ತೆರೆದಿರುವುದು ಈಗ ಕಡ್ಡಾಯ.

3. 'ಆಹಾರವಾಣಿ' ಎನ್ನುವ ಉಚಿತ ಸಹಾಯವಾಣಿಯ ಉದ್ದೇಶವೇನು?

  • ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಗೊಂದಲಗಳು, ಪಡಿತರ ಚೀಟಿಯ ವಿತರಣೆಯ ಸಮಸ್ಯೆ ಮತ್ತು ದೂರುಗಳ ದಾಖಲಿಸಲು
  • ಉಚಿತ ಆಹಾರವನ್ನು ಪಡೆದುಕೊಳ್ಳಲು
  • ಕ್ಷೀರಧಾರೆ ಯೋಜನೆಗೆ ಸಂಬಂಧಿಸಿದ ದೂರುಗಳ ನೀಡಲು
  • ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರ ಧಾನ್ಯಗಳ ಬಗ್ಗೆ ಸಲಹೆ ಪಡೆಯಲು


ಉ: ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಗೊಂದಲಗಳು, ಪಡಿತರ ಚೀಟಿಯ ವಿತರಣೆಯ ಸಮಸ್ಯೆ ಮತ್ತು ದೂರುಗಳ ದಾಖಲಿಸಲು
'ಅನ್ನಭಾಗ್ಯ' ಯೋಜನೆಗೆ ಸಂಬಂಧಿಸಿದಂತೆ ಉಂಟಾಗುವ ಗೊಂದಲಗಳು ಹಾಗೂ ಪಡಿತರ ಚೀಟಿಯ ವಿತರಣೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಮತ್ತು ಇನ್ನಿತರ ದೂರುಗಳನ್ನು ದಾಖಲಿಸಲು ಟೋಲ್ ಫ್ರೀ 1967 'ಆಹಾರವಾಣಿ' ಎಂಬ ಉಚಿತ ಸಹಾಯವಾಣಿಯನ್ನು ಸರ್ಕಾರವು ಆರಂಭಿಸಿದೆ.

4. ಶಾಲಾ ಮಕ್ಕಳಿಗೆ ಬಿಸಿಹಾಲು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಯೋಜನೆ ಯಾವುದು?

  • ಹಾಲುಭಾಗ್ಯ
  • ಕ್ಷೀರಭಾಗ್ಯ
  • ಅಮೃತಧಾರೆ
  • ಅಮೃತಭಾಗ್ಯ


ಉ: ಕ್ಷೀರಭಾಗ್ಯ
ಶಾಲಾ ಮಕ್ಕಳಿಗೆ ಬಿಸಿಹಾಲು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಯೋಜನೆ ಕ್ಷೀರಭಾಗ್ಯ ಯೋಜನೆ. ಈ ಯೋಜನೆ 2013ರ ಆಗಸ್ಟ್ ತಿಂಗಳಿನಿಂದ ರಾಜ್ಯದಾದ್ಯಂತ ಜಾರಿಗೆ ಬಂದಿತು. ಕ್ಷೀರಭಾಗ್ಯ ಯೋಜನೆಯ ಪ್ರಮುಖ ಉದ್ದೇಶ ಹಾಲು ನೀಡುವುದರ ಮೂಲಕ ಮಕ್ಕಳ ಪೌಷ್ಠಿಕತೆ ಹೆಚ್ಚಿಸುವುದು. ಕರ್ನಾಟಕ ಸರ್ಕಾರದ ವತಿಯಿಂದ ಅಂಗನವಾಡಿ ಮತ್ತು 1 ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ನೀಡುವುದು.

5. ವಿದ್ಯಾಸಿರಿ ಎಂಬ ಯೋಜನೆ ಯಾವಾಗ ಜಾರಿಗೆ ಬಂದಿತು?

  • 2013 ಅಕ್ಟೋಬರ್ 1
  • 2014 ಸೆಪ್ಟೆಂಬರ್ 1
  • 2013 ಡಿಸೆಂಬರ್ 1
  • 2014 ಡಿಸೆಂಬರ್ 1


ಉ: 2013 ಅಕ್ಟೋಬರ್ 1
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಊಟ ಹಾಗೂ ವಸತಿಗಾಗಿ ಅನುಕೂಲ ಕಲ್ಪಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುವುದು ವಿದ್ಯಾಸಿರಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ವಿದ್ಯಾಸಿರಿ ಯೋಜನೆ 2013 ಅಕ್ಟೋಬರ್ 1 ರಿಂದ ರಾಜ್ಯದಾದ್ಯಂತ ಜಾರಿಗೊಂಡಿದೆ.

6. ಬಡವರ್ಗದ ಅಲ್ಪಸಂಖ್ಯಾತ ಮಹಿಳೆಯರ ವಿವಾಹಕ್ಕೆ ಧನ ಸಹಾಯ ಮಾಡುವುದಕ್ಕಾಗಿ ರಚಿಸಿರುವ ಯೋಜನೆ ಯಾವುದು?

  • ಶಾದಿ ಭಾಗ್ಯ
  • ವಿವಾಹ ಕರೆಯೋಲೆ
  • ಕಲ್ಯಾಣ ಭಾಗ್ಯ
  • ಈ ಬಂಧನ


ಉ: ಶಾದಿ ಭಾಗ್ಯ
ಬಡವರ್ಗದ ಅಲ್ಪಸಂಖ್ಯಾತ ಮಹಿಳೆಯರ ವಿವಾಹಕ್ಕೆ ಧನ ಸಹಾಯ ಮಾಡುವುದಕ್ಕಾಗಿ ರಚಿಸಿರುವ ಯೋಜನೆ ಶಾದಿ ಭಾಗ್ಯ ಅಥವಾ ಬಿದಾಯಿ ಯೋಜನೆ. ಶಾದಿ ಭಾಗ್ಯ ಯೋಜನೆಯನ್ನು 2013 ರಲ್ಲಿ ಜಾರಿಗೆ ತರಲಾಗಿತ್ತು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಡ ವಿಧವೆಯರು, ವಿಚ್ಛೇದಿತ ಮಹಿಳೆ, ಅಂಗವಿಕಲ, ಅವಿವಾಹಿತ ಕ್ರಿಶ್ಚಿಯನ್, ಹಿಂದುಳಿದ ಮುಸ್ಲಿಂ ಮಹಿಳೆಯರಿಗಾಗಿದ್ದ ಈ ಯೋಜನೆಯನ್ನು ನಂತರ ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಹಾಗೂ ಪಾರ್ಸಿ ಜನಾಂಗಕ್ಕೆ ವಿಸ್ತರಿಸಲಾಯಿತು.


7. ರಾಜ್ಯದ ಕ್ರೀಡಾಪಟುಗಳಿಗೆ ಅಪಘಾತ ಮತ್ತು ವೈದ್ಯಕೀಯ ವಿಮಾ ಸುರಕ್ಷೆ ನೀಡುವುದಕ್ಕಾಗಿ ರಚಿಸಿರುವ ಯೋಜನೆ ಯಾವುದು?

  • ಕ್ರೀಡಾ ಸಂಜೀವಿನಿ ಯೋಜನೆ
  • ಕ್ರೀಡೆ ಸೌಭಾಗ್ಯ
  • ಸೇಪ್ಟಿ ಅಂಡ್ ಸೇವ್
  • ಮೇಲಿನ ಯಾವುದು ಅಲ್ಲ


ಉ: ಕ್ರೀಡಾ ಸಂಜೀವಿನಿ ಯೋಜನೆ
ರಾಜ್ಯದ ಕ್ರೀಡಾಪಟುಗಳಿಗೆ ಅಪಘಾತ ಮತ್ತು ವೈದ್ಯಕೀಯ ವಿಮಾ ಸುರಕ್ಷೆ ನೀಡುವುದಕ್ಕಾಗಿ ರಚಿಸಿರುವ ಯೋಜನೆ ಕ್ರೀಡಾ ಸಂಜೀವಿನಿ ಯೋಜನೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಜಾರಿಗೊಳಿಸಲಾಗಿದೆ. 15 ರಿಂದ 25 ವರ್ಷದ ಒಳಗಿನ ರಾಜ್ಯದ ಕ್ರೀಡಾಪಟುಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಈ ಯೋಜನೆಯ ಪೂರ್ಣ ಹೆಸರು ಯುವ ಕ್ರೀಡಾ ಸಂಜೀವಿನಿ ಯೋಜನೆ. ಈ ಯೋಜನೆಯು ರಾಜ್ಯದ ಕ್ರೀಡಾಪಟುಗಳಿಗೆ ಮಾತ್ರ ಮೀಸಲಾಗಿದೆ.


8. ಶುಚಿ ಯೋಜನೆಯ ಪ್ರಯೋಜನಾ ಪಡೆದುಕೊಳ್ಳುವವರು ಯಾರು?

  • ವೃದ್ಧರು
  • ಅಂಗವಿಕಲ ಬಾಲಕರು
  • ಬಾಲಕರು
  • ಬಾಲಕಿಯರು


ಉ: ಬಾಲಕಿಯರು
ಬಾಲಕಿಯರಿಗೆ ಮಾಸಿಕ ಋತು ಚಕ್ರದ ಸಮಯದಲ್ಲಿ ನ್ಯಾಪಕಿನ್ ನೀಡಿ ಸುರಕ್ಷತಾ ಕ್ರಮ ಅನುಸರಿಸಿ ಅವರ ಆರೋಗ್ಯ ಕಾಪಾಡುವುದು ಈ ಶುಚಿ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಜಾರಿಗೆ ತಂದರು. ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಉಚಿತ ನ್ಯಾಪಕಿನ್ ನೀಡುತ್ತಾರೆ.

9. ಶುಚಿ ಯೋಜನೆಯ ಘೋಷವಾಕ್ಯವೇನು?

  • ಶುಚಿ ಇದ್ದಡೆ - ಸ್ವಚ್ಛಂದ - ಆನಂದ
  • ಹೆಣ್ಣೊಂದು ಕಲಿತರೆ ದೇಶವೇ ಬೆಳೆದಂತೆ
  • ಶುಚಿ ಇದ್ದರೆ ಆರೋಗ್ಯ
  • ಶುಚಿ ಇರಲು ಭಯ ದೂರವಿದೆ


ಉ: ಶುಚಿ ಇದ್ದಡೆ - ಸ್ವಚ್ಛಂದ - ಆನಂದ
ಶುಚಿ ಯೋಜನೆಯ ಘೋಷವಾಕ್ಯ ಶುಚಿ ಇದ್ದಡೆ - ಸ್ವಚ್ಛಂದ - ಆನಂದ. ಬಾಲಕಿಯರಿಗೆ ಮಾಸಿಕ ಋತು ಚಕ್ರದ ಸಮಯದಲ್ಲಿ ನ್ಯಾಪಕಿನ್ ನೀಡಿ ಸುರಕ್ಷತಾ ಕ್ರಮ ಅನುಸರಿಸಿ ಅವರ ಆರೋಗ್ಯ ಕಾಪಾಡುವುದು ಈ ಶುಚಿ ಯೋಜನೆಯ ಮುಖ್ಯ ಉದ್ದೇಶ. ಇದರ ಘೋಷಣೆ 'ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ'.


10. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಅಭಿಯಾನ ಯೋಜನೆಯ ಉದ್ದೇಶವೇನು?

  • ಆರ್ಥಿಕವಾಗಿ ಉತ್ಪಾದಕತೆ ಹೊಂದಿರುವ ದಕ್ಷ ಸಮಾನತೆ ಮತ್ತು ಜವಾಬ್ದಾರಿ ನಗರಗಳನ್ನು ರೂಪಿಸುವುದು
  • ಹಳ್ಳಿಗಳನ್ನು ನಗರವನ್ನಾಗಿಸುವುದು
  • ಎಲ್ಲಾ ನಗರಗಳಿಗೆ ರಸ್ತೆಯನ್ನು ನಿರ್ಮಾಣಮಾಡುವುದು
  • ಮೇಲಿನ ಯಾವುದು ಅಲ್ಲಾ


ಉ: ಆರ್ಥಿಕವಾಗಿ ಉತ್ಪಾದಕತೆ ಹೊಂದಿರುವ ದಕ್ಷ ಸಮಾನತೆ ಮತ್ತು ಜವಾಬ್ದಾರಿ ನಗರಗಳನ್ನು ರೂಪಿಸುವುದು
ಕೇಂದ್ರ ಸರ್ಕಾರದ ನಗರಾಭಿವೃದ್ದಿ ಇಲಾಖೆ ದೇಶಾದ್ಯಂತ ಅನುಷ್ಠಾನಗೂಳಿಸುತ್ತಿರುವ ಯೋಜನೆ ಇದಾಗಿದೆ. ಆರ್ಥಿಕವಾಗಿ ಉತ್ಪಾದಕತೆ ಹೊಂದಿರುವ ದಕ್ಷ ಸಮಾನತೆ ಮತ್ತು ಜವಾಬ್ದಾರಿ ನಗರಗಳನ್ನು ರೂಪಿಸುವ ಗುರಿ ಹೊಂದಿರುವುದು ಈ ಅಭಿಯಾನದ ಯೋಜನೆಯ ಮುಖ್ಯ ಉದ್ದೇಶ. ಕರ್ನಾಟಕ ನೋಡಲ್ ಏಜೆನ್ಸಿ : ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ.

ಸ್ವಾಗತ

ಆತ್ಮೀಯ ಸ್ನೇಹಿತರೆ ನಿಮಗೆ ನಮ್ಮ ಶಾಲೆಗೆ ಸ್ವಾಗತ ಸುಸ್ವಾಗತ