ಕರ್ನಾಟಕ ಯೋಜನೆಗೆ ಸಂಬಂಧಿಸಿದ ಪ್ರಶ್ನೋತ್ತರಗಳು
- ಅನ್ನಭಾಗ್ಯ
- ಹಸಿವು ವಿನಾಶ
- ಅನ್ನದಾನ
- ಕ್ಷೀರಧಾರೆ
ಕರ್ನಾಟಕ ಸರ್ಕಾರದ ಆಹಾರ ಇಲಾಖೆ ವತಿಯಿಂದ ಕಡು ಬಡವರಿಗೆ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಜೊತೆಗೆ ರಾಗಿ, ಜೋಳ, ಗೋಧಿಯನ್ನು ಮತ್ತು ರಾಜ್ಯದ ಬಡವರಿಗೂ ಸಹಿತ ಆಹಾರ ಭದ್ರತೆ ನೀಡಿ ಹಸಿವು ಮುಕ್ತ ರಾಜ್ಯ ನಿರ್ಮಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ 2013ರ ಜುಲೈ ತಿಂಗಳಿನಿಂದ ರಾಜ್ಯದಾದ್ಯಂತ ಜಾರಿಯಾಗಿದೆ.
- ಪಡಿತರ ಖಾತ್ರಿ
- ಅನ್ನ ರಕ್ಷಕ
- ಭಕ್ಷಕಬಲಿ
- ಪಡಿತರ ಭಾಗ್ಯ
ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರವು ಪಡಿತರ ಖಾತ್ರಿ ಯೋಜನೆಯನ್ನು ಜಾರಿಗೆತಂದಿದೆ. ಇದರಿಂದಾಗಿ ಭಾನುವಾರವೂ ಸೇರಿದಂತೆ ಪ್ರತಿ ತಿಂಗಳು 1 ರಿಂದ 10ನೇ ತಾರೀಖಿನವರೆಗೆ ಬೆಳಿಗ್ಗೆ 8ರಿಂದ 12ರ ವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ನ್ಯಾಯ ಬೆಲೆ ಅಂಗಡಿಯನ್ನು ತೆರೆದಿರುವುದು ಈಗ ಕಡ್ಡಾಯ.
- ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಗೊಂದಲಗಳು, ಪಡಿತರ ಚೀಟಿಯ ವಿತರಣೆಯ ಸಮಸ್ಯೆ ಮತ್ತು ದೂರುಗಳ ದಾಖಲಿಸಲು
- ಉಚಿತ ಆಹಾರವನ್ನು ಪಡೆದುಕೊಳ್ಳಲು
- ಕ್ಷೀರಧಾರೆ ಯೋಜನೆಗೆ ಸಂಬಂಧಿಸಿದ ದೂರುಗಳ ನೀಡಲು
- ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರ ಧಾನ್ಯಗಳ ಬಗ್ಗೆ ಸಲಹೆ ಪಡೆಯಲು
'ಅನ್ನಭಾಗ್ಯ' ಯೋಜನೆಗೆ ಸಂಬಂಧಿಸಿದಂತೆ ಉಂಟಾಗುವ ಗೊಂದಲಗಳು ಹಾಗೂ ಪಡಿತರ ಚೀಟಿಯ ವಿತರಣೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಮತ್ತು ಇನ್ನಿತರ ದೂರುಗಳನ್ನು ದಾಖಲಿಸಲು ಟೋಲ್ ಫ್ರೀ 1967 'ಆಹಾರವಾಣಿ' ಎಂಬ ಉಚಿತ ಸಹಾಯವಾಣಿಯನ್ನು ಸರ್ಕಾರವು ಆರಂಭಿಸಿದೆ.
- ಹಾಲುಭಾಗ್ಯ
- ಕ್ಷೀರಭಾಗ್ಯ
- ಅಮೃತಧಾರೆ
- ಅಮೃತಭಾಗ್ಯ
ಶಾಲಾ ಮಕ್ಕಳಿಗೆ ಬಿಸಿಹಾಲು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಯೋಜನೆ ಕ್ಷೀರಭಾಗ್ಯ ಯೋಜನೆ. ಈ ಯೋಜನೆ 2013ರ ಆಗಸ್ಟ್ ತಿಂಗಳಿನಿಂದ ರಾಜ್ಯದಾದ್ಯಂತ ಜಾರಿಗೆ ಬಂದಿತು. ಕ್ಷೀರಭಾಗ್ಯ ಯೋಜನೆಯ ಪ್ರಮುಖ ಉದ್ದೇಶ ಹಾಲು ನೀಡುವುದರ ಮೂಲಕ ಮಕ್ಕಳ ಪೌಷ್ಠಿಕತೆ ಹೆಚ್ಚಿಸುವುದು. ಕರ್ನಾಟಕ ಸರ್ಕಾರದ ವತಿಯಿಂದ ಅಂಗನವಾಡಿ ಮತ್ತು 1 ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ನೀಡುವುದು.
- 2013 ಅಕ್ಟೋಬರ್ 1
- 2014 ಸೆಪ್ಟೆಂಬರ್ 1
- 2013 ಡಿಸೆಂಬರ್ 1
- 2014 ಡಿಸೆಂಬರ್ 1
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಊಟ ಹಾಗೂ ವಸತಿಗಾಗಿ ಅನುಕೂಲ ಕಲ್ಪಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುವುದು ವಿದ್ಯಾಸಿರಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ವಿದ್ಯಾಸಿರಿ ಯೋಜನೆ 2013 ಅಕ್ಟೋಬರ್ 1 ರಿಂದ ರಾಜ್ಯದಾದ್ಯಂತ ಜಾರಿಗೊಂಡಿದೆ.
- ಶಾದಿ ಭಾಗ್ಯ
- ವಿವಾಹ ಕರೆಯೋಲೆ
- ಕಲ್ಯಾಣ ಭಾಗ್ಯ
- ಈ ಬಂಧನ
ಬಡವರ್ಗದ ಅಲ್ಪಸಂಖ್ಯಾತ ಮಹಿಳೆಯರ ವಿವಾಹಕ್ಕೆ ಧನ ಸಹಾಯ ಮಾಡುವುದಕ್ಕಾಗಿ ರಚಿಸಿರುವ ಯೋಜನೆ ಶಾದಿ ಭಾಗ್ಯ ಅಥವಾ ಬಿದಾಯಿ ಯೋಜನೆ. ಶಾದಿ ಭಾಗ್ಯ ಯೋಜನೆಯನ್ನು 2013 ರಲ್ಲಿ ಜಾರಿಗೆ ತರಲಾಗಿತ್ತು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಡ ವಿಧವೆಯರು, ವಿಚ್ಛೇದಿತ ಮಹಿಳೆ, ಅಂಗವಿಕಲ, ಅವಿವಾಹಿತ ಕ್ರಿಶ್ಚಿಯನ್, ಹಿಂದುಳಿದ ಮುಸ್ಲಿಂ ಮಹಿಳೆಯರಿಗಾಗಿದ್ದ ಈ ಯೋಜನೆಯನ್ನು ನಂತರ ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಹಾಗೂ ಪಾರ್ಸಿ ಜನಾಂಗಕ್ಕೆ ವಿಸ್ತರಿಸಲಾಯಿತು.
- ಕ್ರೀಡಾ ಸಂಜೀವಿನಿ ಯೋಜನೆ
- ಕ್ರೀಡೆ ಸೌಭಾಗ್ಯ
- ಸೇಪ್ಟಿ ಅಂಡ್ ಸೇವ್
- ಮೇಲಿನ ಯಾವುದು ಅಲ್ಲ
ರಾಜ್ಯದ ಕ್ರೀಡಾಪಟುಗಳಿಗೆ ಅಪಘಾತ ಮತ್ತು ವೈದ್ಯಕೀಯ ವಿಮಾ ಸುರಕ್ಷೆ ನೀಡುವುದಕ್ಕಾಗಿ ರಚಿಸಿರುವ ಯೋಜನೆ ಕ್ರೀಡಾ ಸಂಜೀವಿನಿ ಯೋಜನೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಜಾರಿಗೊಳಿಸಲಾಗಿದೆ. 15 ರಿಂದ 25 ವರ್ಷದ ಒಳಗಿನ ರಾಜ್ಯದ ಕ್ರೀಡಾಪಟುಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಈ ಯೋಜನೆಯ ಪೂರ್ಣ ಹೆಸರು ಯುವ ಕ್ರೀಡಾ ಸಂಜೀವಿನಿ ಯೋಜನೆ. ಈ ಯೋಜನೆಯು ರಾಜ್ಯದ ಕ್ರೀಡಾಪಟುಗಳಿಗೆ ಮಾತ್ರ ಮೀಸಲಾಗಿದೆ.
- ವೃದ್ಧರು
- ಅಂಗವಿಕಲ ಬಾಲಕರು
- ಬಾಲಕರು
- ಬಾಲಕಿಯರು
ಬಾಲಕಿಯರಿಗೆ ಮಾಸಿಕ ಋತು ಚಕ್ರದ ಸಮಯದಲ್ಲಿ ನ್ಯಾಪಕಿನ್ ನೀಡಿ ಸುರಕ್ಷತಾ ಕ್ರಮ ಅನುಸರಿಸಿ ಅವರ ಆರೋಗ್ಯ ಕಾಪಾಡುವುದು ಈ ಶುಚಿ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಜಾರಿಗೆ ತಂದರು. ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಉಚಿತ ನ್ಯಾಪಕಿನ್ ನೀಡುತ್ತಾರೆ.
- ಶುಚಿ ಇದ್ದಡೆ - ಸ್ವಚ್ಛಂದ - ಆನಂದ
- ಹೆಣ್ಣೊಂದು ಕಲಿತರೆ ದೇಶವೇ ಬೆಳೆದಂತೆ
- ಶುಚಿ ಇದ್ದರೆ ಆರೋಗ್ಯ
- ಶುಚಿ ಇರಲು ಭಯ ದೂರವಿದೆ
ಶುಚಿ ಯೋಜನೆಯ ಘೋಷವಾಕ್ಯ ಶುಚಿ ಇದ್ದಡೆ - ಸ್ವಚ್ಛಂದ - ಆನಂದ. ಬಾಲಕಿಯರಿಗೆ ಮಾಸಿಕ ಋತು ಚಕ್ರದ ಸಮಯದಲ್ಲಿ ನ್ಯಾಪಕಿನ್ ನೀಡಿ ಸುರಕ್ಷತಾ ಕ್ರಮ ಅನುಸರಿಸಿ ಅವರ ಆರೋಗ್ಯ ಕಾಪಾಡುವುದು ಈ ಶುಚಿ ಯೋಜನೆಯ ಮುಖ್ಯ ಉದ್ದೇಶ. ಇದರ ಘೋಷಣೆ 'ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ'.
10. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಅಭಿಯಾನ ಯೋಜನೆಯ ಉದ್ದೇಶವೇನು?
- ಆರ್ಥಿಕವಾಗಿ ಉತ್ಪಾದಕತೆ ಹೊಂದಿರುವ ದಕ್ಷ ಸಮಾನತೆ ಮತ್ತು ಜವಾಬ್ದಾರಿ ನಗರಗಳನ್ನು ರೂಪಿಸುವುದು
- ಹಳ್ಳಿಗಳನ್ನು ನಗರವನ್ನಾಗಿಸುವುದು
- ಎಲ್ಲಾ ನಗರಗಳಿಗೆ ರಸ್ತೆಯನ್ನು ನಿರ್ಮಾಣಮಾಡುವುದು
- ಮೇಲಿನ ಯಾವುದು ಅಲ್ಲಾ
ಕೇಂದ್ರ ಸರ್ಕಾರದ ನಗರಾಭಿವೃದ್ದಿ ಇಲಾಖೆ ದೇಶಾದ್ಯಂತ ಅನುಷ್ಠಾನಗೂಳಿಸುತ್ತಿರುವ ಯೋಜನೆ ಇದಾಗಿದೆ. ಆರ್ಥಿಕವಾಗಿ ಉತ್ಪಾದಕತೆ ಹೊಂದಿರುವ ದಕ್ಷ ಸಮಾನತೆ ಮತ್ತು ಜವಾಬ್ದಾರಿ ನಗರಗಳನ್ನು ರೂಪಿಸುವ ಗುರಿ ಹೊಂದಿರುವುದು ಈ ಅಭಿಯಾನದ ಯೋಜನೆಯ ಮುಖ್ಯ ಉದ್ದೇಶ. ಕರ್ನಾಟಕ ನೋಡಲ್ ಏಜೆನ್ಸಿ : ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ.
No comments:
Post a Comment